ಮೋದಿಯ ಭಾರತಕ್ಕೂ- ಟ್ರಂಪ್ ನ ಅಮೆರಿಕಾಗೂ ವ್ಯತ್ಯಾಸವಿಲ್ಲ: ಮಾರ್ಟಿನ್ ಲೂಥರ್-3

  ಬೆಂಗಳೂರು: ಅಮೆರಿಕ ಅಧ್ಯಕ್ಷ ಡೊನಾಲ್ಡ್‌  ಟ್ರಂಪ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ನಡವಳಿಕೆಯಲ್ಲಿ ಏನೂ ವ್ಯತ್ಯಾಸವಿಲ್ಲ. ಇಬ್ಬರ ಧೋರಣೆ ಒಂದೇ ಎಂದು ಅಮೆರಿಕದ ಸಾಮಾಜಿಕ ಹಕ್ಕುಗಳ ಕಾರ್ಯಕರ್ತ ಮಾರ್ಟಿನ್ ಲೂಥರ್ ಕಿಂಗ್-3 ವಾಗ್ದಾಳಿ ನಡೆಸಿದ್ದಾರೆ.

 

ನಗರದ ಜಿಕೆವಿಕೆ ಆವರಣದಲ್ಲಿ ಆಯೋಜಿಸಲಾಗಿರುವ ಡಾ. ಬಿ.ಆರ್. ಅಂಬೇಡ್ಕರ್ ಅಂತರರಾಷ್ಟ್ರೀಯ ಸಮ್ಮೇಳನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ಅಲ್ಪಸಂಖ್ಯಾತರ ಬಗ್ಗೆ ಒಲವಿಲ್ಲದ ಸರ್ಕಾರಗಳಿವೆ ಎಂದು ಟೀಕಿಸಿದರು.

 

ಅಮೆರಿಕ ಹಾಗೂ ಭಾರತದಲ್ಲಿ ಒಂದೇ ರೀತಿಯ ಸರ್ಕಾರಗಳಿವೆ. ಬಡವರನ್ನು ಕಂಡರೆ ತಿರಸ್ಕಾರ, ಮಾಧ್ಯಮಗಳಿಗೆ ಸ್ವಾತಂತ್ರ್ಯವಿಲ್ಲ, ಅಲ್ಪಸಂಖ್ಯಾತರಿಗೆ ಹಿಂಸೆ ನೀಡಲಾಗುತ್ತಿದೆ’ ಎಂದು ಹೇಳಿದರು.

 

ಗೋರಕ್ಷಣೆ ಹೆಸರಲ್ಲಿ ದಲಿತರ ಹತ್ಯೆ ನಡೆಯುತ್ತಿದೆ. ಆದರೆ, ದಲಿತರ ಜೀವಕ್ಕೂ ಬೆಲೆಯಿದೆ. ದಲಿತ ಯುವಕರು ಹೋರಾಟ ನಡೆಸುತ್ತಿದ್ದರೂ ಸಮಾನತೆ ಸಾಧ್ಯವಾಗಿಲ್ಲ ಎಂದು ತಿಳಿಸಿದರು. ಬಲಪಂಥೀಯರಿಂದ ಸಾಮಾಜಿಕ ಆರ್ಥಿಕ ಶಕ್ತಿಗಳನ್ನು ನಿಯಂತ್ರಿಸುವ ಅಗತ್ಯವಿದೆ ಎಂದು ಹೇಳಿದ ಅವರು ಊನಾ ದಲ್ಲಿ ಗೋರಕ್ಷಣೆ ಹೆಸರಲ್ಲಿ ನಡೆದ ದಲಿತರ ಮೇಲಿನ ಹಲ್ಲೆ ಪ್ರಕರಣವನ್ನು ನೆನಪಿಸಿಕೊಂಡರು. 2013ರಲ್ಲಿ  ಬಾಳ ಠಾಕ್ರೆ ನಿಧನದ ವೇಳೆ ಇಡೀ ಮುಂಬಯಿ ನಗರವೇ ಸ್ತಬ್ಧವಾಗಿತ್ತು,  ಈ ವೇಳೆ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದ ಯುವತಿಯನ್ನು ಬಂಧಿಸಲಾಗಿತ್ತು ಎಂದು ಹೇಳಿದರು.

 

ಗೋರಕ್ಷಕರೆಂದು ಹೇಳಿಕೊಳ್ಳುವ ಗೋ-ಗೂಂಡಾಗಳನ್ನು ಪ್ರದಾನಿ ನರೇಂದ್ರ ಮೋದಿಗೆ ನಿಯಂತ್ರಿಸಲು ಸಾಧ್ಯವಾಗಿಲ್ಲ ಎಂದು ಇತಿಹಾಸಕಾರ ರಾಮಚಂದ್ರ ಗುಹಾ ಟೀಕಿಸಿದ್ದಾರೆ. 

Category: