News

ಉತ್ತರಪ್ರದೇಶದಲ್ಲಿ ಎನ್'ಕೌಂಟರ್: 2 ಕ್ರಿಮಿನಲ್'ಗಳ ಹತ್ಯೆ, 7 ಪೊಲೀಸರಿಗೆ ಗಾಯ

  ಕೈರಾನಾ: ಉತ್ತರಪ್ರದೇಶದಲ್ಲಿ ಪೊಲೀಸರು ಎನ್ ಕೌಂಟರ್ ನಡೆಸಿದ್ದು, ಘಟನೆಯಲ್ಲಿ ಮಾಡಲಾಗಿದ್ದು, ಘಟನೆ ವೇಳೆ 7 ಪೊಲೀಸರು ಗಾಯಗೊಂಡು ಇಬ್ಬರು ಕ್ರಿಮಿನಲ್ ಗಳು ಹತ್ಯೆಯಾಗಿರುವ ಘಟನೆ ಶನಿವಾರ ನಡೆದಿದೆ. 

 

ಕೈರಾನಾ ಪೊಲೀಸ್ ಠಾಣಾ ನಿಯಂತ್ರಣದಲ್ಲಿರುವ ಭುರಾ ಗ್ರಾಮದಲ್ಲಿ ಇಂದು ಬೆಳಿಗ್ಗೆ ಉತ್ತರಪ್ರದೇಶ ಪೊಲೀಸರು ಎನ್ ಕೌಂಟರ್ ನಡೆಸಿದ್ದು, ಇಬ್ಬರು ಕ್ರಿಮಿನಲ್ ಗಳನ್ನು ಹತ್ಯೆ ಮಾಡಿದ್ದಾರೆಂದು ತಿಳಿದುಬಂದಿದೆ. 

 

ಘಟನೆಯಲ್ಲಿ ಮತ್ತಿಬ್ಬರು ಕ್ರಿಮಿನಲ್ ಗಳು ತಪ್ಪಿಸಿಕೊಂಡಿದ್ದು, ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಎನ್ ಕೌಂಟರ್ ವೇಳೆ ಪೊಲೀಸರ ಮೇಲೆ ಆರೋಪಿಗಳು ಗುಂಡಿನ ದಾಳಿ ನಡೆಸಿದ್ದು, ದಾಳಿ ವೇಳೆ 7 ಪೊಲೀಸರು ಗಾಯಗೊಂಡಿದ್ದಾರೆಂದು ವರದಿಗಳು ತಿಳಿಸಿವೆ. 

 

Diabetic Friendly Foods to Help You Manage Diabetes Better

There are some specific foods that have been shown to produce positive effects on blood sugar control.

 

ABBIE'S Black Pitted Olive, ABBIE'S Green Whole Olive, AGNESI Whole Wheat Penne Pasta, Aluminium Free Baking Powder, Apple Blueberry Granola, BRM WHEAT GERM, DANA Black Currant Diabetic Spread, DANA Mixed Fruit Diabetic Spread, Darbo Diet orange Diabetic Jam, Darbo Diet strawberry Diabetic Jam, Diet Food Bread Toast, Diet Foods Corn Schezewan.

 

ಕಾನ್ಪುರ: ಸ್ವಾತಂತ್ರ್ಯ ದಿನದಂದು ಆಕಾಶದಲ್ಲಿ ಹಾರಾಡಲಿವೆ ಮೋದಿ ಗಾಳಿಪಟ

  ಸ್ವಾತಂತ್ರ್ಯ ದಿನಾಚರಣೆಯ ದಿನ ಹತ್ತಿರ ಬರುತ್ತಿದೆ. ಸ್ವಾತಂತ್ರ್ಯ ದಿನವನ್ನು ಖುಷಿಯಾಗಿ ಆಚರಿಸಲು ಉತ್ತರ ಪ್ರದೇಶದ ಕಾನ್ಪುರ ಸಿಟಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಭಾವಚಿತ್ರ ಸೇರಿದಂತೆ ಅನೇಕ ಬಣ್ಣಬಣ್ಣದ ಗಾಳಿಪಟಗಳನ್ನು ನಿರ್ಮಿಸಲಾಗಿದೆ.

 

ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಕಾನ್ಪುರ ನಗರದಲ್ಲಿ ಬಣ್ಣಬಣ್ಣದ ಕಾಗದಗಳಿಂದ ತಯಾರಿಸಿದ ನೂರಾರು ಗಾಳಿಪಟಗಳು ಕಾಣಸಿಗುತ್ತವೆ. ಪ್ರಧಾನಿಯವರ ಫೋಟೋದಲ್ಲಿ ಮಹಾನಾಯಕ ಮತ್ತು ಅಚ್ಛೆ ದಿನ್ ಎಂದು ಬರೆಯಲಾಗಿದೆ.

 

ಡೋಕ್ಲಾಮ್ ವಿವಾದ: ಅಜಿತ್ ದೋವಲ್ ಒಬ್ಬ 'ಸಂಚುಕೋರ' ಎಂದ ಚೀನಾ

ಬೀಜಿಂಗ್: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಪ್ರವಾಸಕ್ಕೆ 2 ದಿನ ಮುನ್ನ ಚೀನಾ ಕ್ಯಾತೆ ತೆಗೆದಿದೆ. 'ಪ್ರಮುಖ ಸಂಚುಕೋರನ' ಪ್ರವಾಸ ನಿರರ್ಥಕ ಎನ್ನುವ ಮೂಲಕ ಡೋಕ್ಲಾಮ್ ಬಿಕ್ಕಟ್ಟಿಗೆ ಅವರೇ ಕಾರಣ ಎಂದು ಚೀನಾ ದೂಷಿಸಿದೆ. 

 

ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಉದ್ದೇಶಿತ ಚೀನಾ ಭೇಟಿ ಬ್ರಿಕ್ಸ್ ಸಮ್ಮೇಳನಕ್ಕಷ್ಟೇ ಸೀಮಿತವಾಗಿದ್ದು, ಗಡಿಯಲ್ಲಿ ಉದ್ಭವಿಸಿರುವ ಸಂಘರ್ಷದ ಪರಿಹಾರಕ್ಕಲ್ಲ ಎಂದು ಚೀನಾದ ಗ್ಲೋಬರ್ ಟೈಮ್ಸ್ ಸಂಪಾದಕೀಯ ಬರೆದುಕೊಂಡಿದೆ.

 

ಮೋದಿಯ ಭಾರತಕ್ಕೂ- ಟ್ರಂಪ್ ನ ಅಮೆರಿಕಾಗೂ ವ್ಯತ್ಯಾಸವಿಲ್ಲ: ಮಾರ್ಟಿನ್ ಲೂಥರ್-3

  ಬೆಂಗಳೂರು: ಅಮೆರಿಕ ಅಧ್ಯಕ್ಷ ಡೊನಾಲ್ಡ್‌  ಟ್ರಂಪ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ನಡವಳಿಕೆಯಲ್ಲಿ ಏನೂ ವ್ಯತ್ಯಾಸವಿಲ್ಲ. ಇಬ್ಬರ ಧೋರಣೆ ಒಂದೇ ಎಂದು ಅಮೆರಿಕದ ಸಾಮಾಜಿಕ ಹಕ್ಕುಗಳ ಕಾರ್ಯಕರ್ತ ಮಾರ್ಟಿನ್ ಲೂಥರ್ ಕಿಂಗ್-3 ವಾಗ್ದಾಳಿ ನಡೆಸಿದ್ದಾರೆ.

 

ನಗರದ ಜಿಕೆವಿಕೆ ಆವರಣದಲ್ಲಿ ಆಯೋಜಿಸಲಾಗಿರುವ ಡಾ. ಬಿ.ಆರ್. ಅಂಬೇಡ್ಕರ್ ಅಂತರರಾಷ್ಟ್ರೀಯ ಸಮ್ಮೇಳನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ಅಲ್ಪಸಂಖ್ಯಾತರ ಬಗ್ಗೆ ಒಲವಿಲ್ಲದ ಸರ್ಕಾರಗಳಿವೆ ಎಂದು ಟೀಕಿಸಿದರು.

 

ಅಮೆರಿಕ ಹಾಗೂ ಭಾರತದಲ್ಲಿ ಒಂದೇ ರೀತಿಯ ಸರ್ಕಾರಗಳಿವೆ. ಬಡವರನ್ನು ಕಂಡರೆ ತಿರಸ್ಕಾರ, ಮಾಧ್ಯಮಗಳಿಗೆ ಸ್ವಾತಂತ್ರ್ಯವಿಲ್ಲ, ಅಲ್ಪಸಂಖ್ಯಾತರಿಗೆ ಹಿಂಸೆ ನೀಡಲಾಗುತ್ತಿದೆ’ ಎಂದು ಹೇಳಿದರು.

 

ಬೆಂಗಳೂರು: ಐಎಎಸ್ ಅಧಿಕಾರಿ ಮನೆಯಿಂದ ನಗದು, ಚಿನ್ನ ದರೋಡೆ

  ಬೆಂಗಳೂರು: ಹಿರಿಯ ಐಎಎಸ್ ಅಧಿಕಾರಿ ಸುಬೋಧ್ ಯಾದವ್ ಅವರ ಸಂಜಯ್ ನಗರ ನಿವಾಸದ ಬಾಗಿಲು ಮುರಿದು ಒಳನುಗ್ಗಿದ ದರೋಡೆಕೋರರು ಅಪಾರ ಪ್ರಮಾಣದ ಚಿನ್ನ ಮತ್ತು ನಗದು ಕದ್ದು ಪರಾರಿಯಾದ ಘಟನೆ ಮೊನ್ನೆ ಭಾನುವಾರ ರಾತ್ರಿ ನಡೆದಿದೆ ಅಧಿಕಾರಿಯ ಕಾರು ಚಾಲಕ ಮನೆಗೆ ಬಂದು ನೋಡಿದಾಗ ಮುಂಭಾಗಿಲು ಒಡೆದಿದ್ದು ಕಂಡುಬಂತು. ತಕ್ಷಣವೇ ಪೊಲೀಸರಿಗೆ ವಿಷಯ ತಿಳಿಸಿದರು.

 

ಕಳೆದ ಭಾನುವಾರ ಬೆಳಗ್ಗೆ ಯಾದವ್ ಮತ್ತು ಅವರ ಕುಟುಂಬ ಚೆನ್ನೈಗೆ ಹೋಗಿದ್ದರು. ಅದೇ ದಿನ ರಾತ್ರಿ ಈ ಘಟನೆ ನಡೆದಿದೆ. ದರೋಡೆಕೋರರು ಚಿನ್ನ ಮತ್ತು 12,000 ರೂ.ನಗದು ಕದ್ದು ಪರಾರಿಯಾಗಿದ್ದಾರೆ. 

 

ಕ್ರಿಕೆಟಿಗ ಉಮೇಶ್ ಯಾದವ್ ಮನೆ ಮೇಲೆ ಕಳ್ಳರ ದಾಳಿ, ಹಣ, ದುಬಾರಿ ಮೊಬೈಲ್ ಗಳ ಕಳವು

ನಾಗ್ಪುರ: ಖ್ಯಾತ ಕ್ರಿಕೆಟಿಗ ಉಮೇಶ್ ಯಾದವ್ ಅವರ ಮನೆ ಮೇಲೆ ಕಳ್ಳರು ದಾಳಿ ನಡೆಸಿದ್ದು, ಮನೆಯಲ್ಲಿ ನಗದು ಮತ್ತು 2 ದುಬಾರಿ ಮೊಬೈಲ್ ಗಳನ್ನು ಕದ್ದು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

 

 

ಉಮೇಶ್ ಯಾದವ್ ಅವ​ರ ನಾಗ್ಪುರದಲ್ಲಿರುವ ಮನೆಗೆ ನುಗ್ಗಿದ್ದ ಕಳ್ಳರು 45 ಸಾವಿರ ರು. ನಗದು ಮತ್ತು 2 ಮೊಬೈಲ್​ ಗಳನ್ನು ಕಳವು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಸೋಮವಾರ ರಾತ್ರಿ ಸುಮಾರ 7ರಿಂದ 9ರ  ನಡುವೆ ಉಮೇಶ್ ಕುಟುಂಬ ಮನೆಯಲ್ಲಿಲ್ಲದ ವೇಳೆ ಕಳ್ಳತನ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

 

ಉಪ ರಾಷ್ಟ್ರಪತಿ ಹುದ್ದೆ: ಗೋಪಾಲಕೃಷ್ಣ ಗಾಂಧಿಗೆ ಬೆಂಬಲ ನೀಡಲು ನಿತೀಶ್ ಕುಮಾರ್ ಒಪ್ಪಿಗೆ

  ನವದೆಹಲಿ: ನಿನ್ನೆ ಎನ್ ಡಿಎ ರಾಷ್ಟ್ರಪತಿ ಅಭ್ಯರ್ಥಿ ರಾಮ್ ನಾಥ್ ಕೋವಿಂದ್ ಅವರಿಗೆ ಬೆಂಬಲ ನೀಡುವುದಾಗಿ ಹೇಳಿದ್ದ ಬಿಹಾರ ಮುಖ್ಯಮಂತ್ರಿ, ಜೆಡಿಯು ನಾಯಕ ನಿತೀಶ್ ಕುಮಾರ್ ಇಂದು ಉಪ ರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸುತ್ತಿರುವ ಯುಪಿಎ ಅಭ್ಯರ್ಥಿ ಗೋಪಾಲ್ ಕೃಷ್ಣ ಗಾಂಧಿ ಅವರಿಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ.

 

ಇಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನಿತೀಶ್ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿ ತಮ್ಮ ಅಭ್ಯರ್ಥಿಗೆ ಬೆಂಬಲ ಸೂಚಿಸುವಂತೆ ಕೋರಿದ್ದರು.

 

ಸೂಟ್ ಕೇಸ್ ಸಂಸ್ಕೃತಿ ಇದ್ದದ್ದು ನಿಜ, ಅವರೆಲ್ಲಾ ಪಕ್ಷ ಬಿಟ್ಟು ಹೋಗಿದ್ದಾರೆ, ಪ್ರಜ್ವಲ್ ಕ್ಷಮೆಯ ಅವಶ್ಯಕತೆಯಿಲ್ಲ: ಎಚ್ಡಿಕೆ

  ಬೆಂಗಳೂರು: ಜೆಡಿಎಸ್‌ನಲ್ಲಿ ಸೂಟ್‌ಕೇಸ್‌ ಸಂಸ್ಕೃತಿ ಇದೆ ಎಂದು ಪ್ರಜ್ವಲ್‌ ರೇವಣ್ಣ ನೀಡಿದ್ದ ಹೇಳಿಕೆಯನ್ನು ಭಿನ್ನಮತೀಯರ ಕಡೆಗೆ ತಿರುಗಿಸಿರುವ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ, ಪ್ರಜ್ವಲ್ ಕ್ಷಮೆ ಕೋರುವ ಅವಶ್ಯಕತೆಯಿಲ್ಲ ಎಂದು ಹೇಳಿದ್ದಾರೆ.

 

ಬೆಂಗಳೂರಿನಲ್ಲಿ ಮಾತನಾಡಿದ ಅವರು.ಈ ಹಿಂದೆ ಜೆಡಿಎಸ್‌ನಲ್ಲಿ ಸೂಟ್‌ಕೇಸ್‌ ಸಂಸ್ಕೃತಿ ಇದ್ದದ್ದು ನಿಜ, ಸೂಟ್‌ಕೇಸ್‌ ಪಡೆಯುತ್ತಿದ್ದವರು ಮುಂದಿನ ಸಾಲಿನಲ್ಲಿ ಕೂರುತ್ತಿದ್ದುದೂ ಹೌದು. ಆದರೆ, ಅವರೆಲ್ಲ ಈಗಾಗಲೇ ಪಕ್ಷ ಬಿಟ್ಟು ಹೋಗಿದ್ದಾರೆ. ಬಹುಶಃ ಅವರನ್ನು ಕುರಿತು ಪ್ರಜ್ವಲ್‌ ಹೇಳಿರಬಹುದು ಎಂದು ಹೇಳಿದರು.

 

“Debug” Your Life With The Professional Service Of A Personal Investigator

“One cannot cure his own suffering by making other’s suffer” – We all know this philosophy very well, but sometimes a human being gets so much overpowered by his greed that he plays a  foul game against his most loved ones too. So, one needs to be extra cautious before blindly trusting someone. The need  for a private investigator arise out of the urgency to find out that whether you are counting upon the right people or not. Private investigators in Surrey are competent enough to resolve any issues that are bothering you for a long time and also gurantee confidentiality of the matter.

ರಾಷ್ಟ್ರಪತಿ ಚುನಾವಣೆ: ಇಂದು ಮೀರಾ ಕುಮಾರ್ ನಾಮಪತ್ರ ಸಲ್ಲಿಕೆ

  ನವದೆಹಲಿ: ಜು.17ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಬುಧವಾರ ಕೊನೆಯ ದಿನವಾಗಿದ್ದು, ವಿರೋಧ ಪಕ್ಷಗಳ ಅಭ್ಯರ್ಥಿಯಾಗಿ ಲೋಕಸಭೆಯ ಮಾಜಿ ಸ್ಪೀಕರ್ ಮೀರಾ ಕುಮಾರ್ ಅವರು ನಾಮಪತ್ರ ಸಲ್ಲಿಸಲಿದ್ದಾರೆ. 

 

ಇಂದು ಬೆಳಿಗ್ಗೆ 11.30ರ ಸುಮಾರಿಗೆ ಲೋಕಸಭೆಯ ಪ್ರಧಾನ ಕಾರ್ಯದರ್ಶಿ ಅವರ ಬಳಿ ಉಮೇದುವಾರಿಕೆ ಸಲ್ಲಿಸಲಿರುವ ಮೀರಾ ಕುಮಾರ್ ಅವರಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಇ, ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಯೆಚೂರಿ ಸೇರಿದಂತೆ ಪ್ರತಿಪಕ್ಷಗಳ ನಾಯಕರು ಸಾಥ್ ನೀಡಲಿದ್ದಾರೆ. 

 

ಇದೂವರೆಗೆ 24 ನಾಮಪತ್ರ ಸಲ್ಲಿಸಿದ್ದಾರೆ. ಆದರೆ, ಕೋವಿಂದ್ ಹೊರತುಪಡಿಸಿ ಉಳಿದವರ ನಾಮಪತ್ರಕ್ಕೆ ಸೂಚಕರೇ ಇಲ್ಲದ ಕಾರಣ ಎಲ್ಲವೂ ತಿರಸ್ಕೃತವಾಗಲಿವೆ ಎಂದು ಹೇಳಲಾಗುತ್ತಿದೆ. 

ಮೋದಿ ಆಡಳಿತದಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ವಾತಾವರಣ ನಿರ್ಮಾಣ: ದೇವೇಗೌಡ

  ಬೆಂಗಳೂರು: ನರೇಂದ್ರ ಮೋದಿ ಆಡಳಿತದಲ್ಲಿ ದೇಶದಲ್ಲಿ  ತುರ್ತುಪರಿಸ್ಥಿತಿಯಂತ ಸ್ಥಿತಿ ನಿರ್ಮಾಣವಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಆರೋಪಿಸಿದ್ದಾರೆ.

 

ತುರ್ತು ಪರಿಸ್ಥಿತಿ ವಿರೋಧಿ ದಿನ’ದ ಪ್ರಯುಕ್ತ ಲೋಕನಾಯಕ ಜೆ.ಪಿ. ವಿಚಾರ ವೇದಿಕೆ ಹಾಗೂ ಯುನೈಟೆಡ್‌ ಲಾಯರ್ಸ್‌ ಫೋರಂ ಆಶ್ರಯದಲ್ಲಿ ನಡೆದ  ಭಾರತದ ಪ್ರಜಾಪ್ರಭುತ್ವ ಅಂದು–ಇಂದು ಕಾರ್ಯಕ್ರಮದಲ್ಲಿ  ನರೇಂದ್ರ- ಮೋದಿ ಡೊನಾಲ್ಡ್ ಟ್ರಂಪ್ ಭೇಟಿ ಬಗ್ಗೆ ಮಾತನಾಡಿದ ಅವರು, ಮೋದಿ ಅಮೆರಿಕಾದ ಸಾಧನವಾಗಿದ್ದಾರೆ. ದೇಶದ ಮಾಧ್ಯಮಗಳ ಮೇಲೆ ಕಾರ್ಪೊರೇಟ್‌ ಸಂಸ್ಥೆಗಳು ಹಿಡಿತ ಹೊಂದಿವೆ. ಇಂತಹ ಸಂದರ್ಭದಲ್ಲಿ ತುರ್ತು ಪರಿಸ್ಥಿತಿ ಬೇಕಿಲ್ಲ ಎಂದು ಹೇಳಿದರು. 

 

ராம்நாத் கோவிந்தை ஆதரிக்க ஒருமனதாக அதிமுக அம்மா அணி முடிவு

குடியரசுத் தலைவர் தேர்தலில் பாஜக வேட்பாளர் ராம்நாத் கோவிந்தை ஆதரிக்க ஒருமனதாக முடிவு செய்யப்பட்டுள்ளதாக முதல்வரும் அதிமுக அம்மா அணியின் தலைமை நிலையச் செயலாளருமான

ಚೀನಾದವರಿಗೆ ವೀಸಾ ನಿಯಮಗಳನ್ನು ಕಠಿಣಗೊಳಿಸಿದ ಪಾಕಿಸ್ತಾನ!

'எய்ம்ஸ்' மருத்துவமனை அமைவது எங்கே?: முதல்வர் பழனிசாமி பதில்

மறைந்த முதல்வர் ஜெயலலிதா பரிந்துரைத்த 5 இடங்களில் ஓர் இடத்தில் 'எய்ம்ஸ்' மருத்துவமனை அமைக்கப்படும் என்று தமிழக முதல்வர் எடப்பாடி கே. பழனிசாமி கூறினார்.

ಕಳೆದ 15 ವರ್ಷಗಳಲ್ಲಿ 10 ಸಾವಿರ ಕೆರೆಗಳ ಕಣ್ಮರೆ: ಟಿ.ಬಿ ಜಯಚಂದ್ರ

Pages

Subscribe to RSS - News